ಮಡಿಕೇರಿ, ಏ. ೨೩: ಕೊಡವ ಕೌಟುಂಬಿಕ ಹಾಕಿ ಹಬ್ಬವು ಕ್ರೀಡೆಯ ಜೊತೆಗೆ ತನ್ನ ವೈವಿಧ್ಯತೆಯ ಕಾರ್ಯಕ್ರಮಗಳ ಮೂಲಕ ಜಗತ್ತಿನ ಗಮನವನ್ನೇ ಸೆಳೆದಿದ್ದು, ಕ್ರೀಡಾಹಬ್ಬವನ್ನು ಮುಂದಿನ ವರ್ಷಗಳಲ್ಲಿ ಮತ್ತಷ್ಟು ವೈಭವದಿಂದ ಆಯೋಜಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಕರೆ ನೀಡಿದರು.

ಮಡಿಕೇರಿಯ ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ್ ಸಭಾಂಗಣದಲ್ಲಿ ಪತ್ರಕರ್ತ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಬರೆದು ಪತ್ರಕರ್ತ ಅನಿಲ್ ಹೆಚ್.ಟಿ. ಹೊರತಂದಿರುವ ‘ಸ್ಟಿಕ್ ವರ್ಕ್ ಮ್ಯಾಜಿಕ್ - ಸಾಗಾ ಆಫ್ ಕೊಡವ ಫ್ಯಾಮಿಲಿ ಹಾಕಿ’ ಎಂಬ ಕೊಡವ ಹಾಕಿ ಪಂದ್ಯಾಟದ ೨೫ ವರ್ಷಗಳ ಇತಿಹಾಸದ ಮಾಹಿತಿಯುಳ್ಳ ಇಂಗ್ಲೀಷ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

೫ ಸಾವಿರ ಹಾಕಿ ಆಟಗಾರರು ಪಂದ್ಯಾಟದಲ್ಲಿ ಪಾಲ್ಗೊಳ್ಳುವುದೇ ಚರಿತ್ರಾರ್ಹ ವಿಚಾರ. ಲಿಮ್ಕಾ ಬುಕ್ ಆಫ್ ರೆಕಾರ್ಡ್, ಗಿನ್ನಿಸ್ ರೆಕಾರ್ಡ್ಗೂ ಕೂಡ ಸೇರಿರುವ ಹಾಕಿ ಪಂದ್ಯಾವಳಿ ಮುಂದಿನ ದಿನಗಳಲ್ಲಿ ವಿಶ್ವದಾಖಲೆಯನ್ನು ನಿರಂತರ ಉಳಿಸಿಕೊಳ್ಳುವಂತಾಗಲಿ ಎಂದು ನಾಣಯ್ಯ ಹಾರೈಸಿದರು.

ಪಾಂಡAಡ ಕುಟ್ಟಪ್ಪ ಮತ್ತು ಕಾಶಿ ಸಹೋದರರ ಪರಿಕಲ್ಪನೆಯಲ್ಲಿ ಮೂಡಿದ ಕೊಡವ ಕೌಟುಂಬಿಕ ಹಾಕಿ ಯಾವುದೇ ಸಮಸ್ಯೆಗಳಿಲ್ಲದೇ ೨೫ ವರ್ಷಗಳನ್ನು ಪೂರೈಸಿದೆ. ೨೫ ಕುಟುಂಬಗಳ ಆಯೋಜಕ ಸಮಿತಿ ಈ ಯಶಸ್ಸಿನಲ್ಲಿ ಪಾಲುದಾರರಾಗಿದ್ದಾರೆ. ಅಂಥ ಎಲ್ಲಾ ಕುಟುಂಬಗಳನ್ನೂ ೨೫ನೇ ವರ್ಷಾಚರಣೆ ಸಂದರ್ಭ ಸ್ಮರಿಸಿಕೊಳ್ಳುವುದು ಅಗತ್ಯ ಎಂದು ನಾಣಯ್ಯ ಹೇಳಿದರು.

ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ ಮಾತನಾಡಿ, ತನ್ನ ತಂದೆ ಪಾಂಡAಡ ಕುಟ್ಟಪ್ಪನವರು ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾವಳಿ ಪ್ರಾರಂಭ ಮಾಡಿದಾಗ ಅನೇಕರು ವೃತ್ತಿಪರರಲ್ಲದವರನ್ನು ಬಳಸಿಕೊಂಡು ಎಂಥ ಹಾಕಿ ಎಂದು ವ್ಯಂಗ್ಯ, ಹಾಸ್ಯ ಮಾಡಿದ್ದರು. ಆದರೂ ಛಲಬಿಡದೆ ಕುಟ್ಟಪ್ಪನವರು ಹಾಕಿ ಪಂದ್ಯಾವಳಿಯನ್ನು ಯಶಸ್ಸಿನ ಹಾದಿಯಲ್ಲಿ ಸಾಗಿಸಿದ್ದರು. ತಂದೆ ಹಾಕಿ ಕೊಟ್ಟ ಮಾರ್ಗದರ್ಶನದಂತೆ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷನಾಗಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಮುನ್ನಡೆಸುತ್ತಿದ್ದೇನೆ. ಪ್ರತೀ ವರ್ಷವೂ ೨೦-೩೦ ಹೊಸ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ಇದೇ ರೀತಿ ಮುಂದುವರೆದರೆ ಮುಂದಿನ ೫ ವರ್ಷಗಳಲ್ಲಿ ೫೦೦ ತಂಡಗಳು ಬರುವ ಸಾಧ್ಯತೆಯಿದೆ. ಈಗಾಗಲೇ ೨೦೩೩ ರವರೆಗೆ ಅಂದರೆ ಮುಂದಿನ ೮ ವರ್ಷಗಳವರೆಗೂ ಆಯೋಜಿಕ ಕುಟುಂಬಸ್ಥರು ಕೊಡವ ಹಾಕಿ ಪಂದ್ಯಾವಳಿ ಆಯೋಜನೆಗೆ ಸಿದ್ದರಾಗಿದ್ದಾರೆ. ಅಂತರರಾಷ್ಟ್ರೀಯ ಸಿಂಥೆಟಿಕ್ ಟರ್ಫ್ ಮೈದಾನ ಬೇಕು. ಹಾಕಿಗೆ ಆದ್ಯತೆ ನೀಡುವ ಕ್ರೀಡಾ ಅಕಾಡೆಮಿಯೂ ಕೊಡಗಿಗೆ ಬೇಕು. ಇದರ ಜಾರಿಗೆ ತಾನು ಪ್ರಯತ್ನಿಸುತ್ತಿದ್ದೇನೆ ಎಂದು ಪಾಂಡAಡ ಬೋಪಣ್ಣ ಹೇಳಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಪಾಂಡAಡ ಕುಟ್ಟಪ್ಪನವರು ೧೯೯೭ ರಲ್ಲಿ ಪ್ರಾರಂಭಿಸಿದ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ ಅನೇಕ ದಾಖಲೆಗಳ ಮೂಲಕ ದೇಶದಲ್ಲಿಯೇ ಪುಟ್ಟ ಜನಾಂಗವಾದ ಕೊಡವರ ಕ್ರೀಡಾ ಸಾಧನೆಯನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದು ಶ್ಲಾಘಿಸಿದರು. ೨೫ ವರ್ಷಗಳ ಹಾಕಿ ಪಂದ್ಯಾವಳಿಯ ಸಮಗ್ರ ಮಾಹಿತಿಯ ಕೃತಿಯನ್ನು ಪ್ರಕಟಿಸಿರುವುದು ಶ್ಲಾಘನೀಯ ಪ್ರಯತ್ನವಾಗಿದೆ ಎಂದೂ ಧರ್ಮಜ ಹೇಳಿದರು.

ಸ್ಟಿಕ್ ವರ್ಕ್ ಮ್ಯಾಜಿಕ್ ಕೃತಿಯ ಲೇಖಕ, ಪತ್ರಕರ್ತ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಮಾತನಾಡಿ, ಅನೇಕ ಕುಟುಂಬಗಳಲ್ಲಿ ಸಮರ್ಪಕ ಮಾಹಿತಿಯ ದಾಖಲೆಯ ಕೊರತೆಯಿದೆ. ಮುಂದಿನ ದಿನಗಳಲ್ಲಿ ಇಂಥ ಕೊರತೆಯಾಗದಂತೆ ಕೊಡವ ಹಾಕಿ ಅಕಾಡೆಮಿಯೇ ಪರಿಪೂರ್ಣ ರೀತಿಯಲ್ಲಿ ಪ್ರತೀ ವರ್ಷದ ಹಾಕಿ ಪಂದ್ಯಾವಳಿಯ ದಾಖಲೆಯನ್ನು ಸಂಗ್ರಹಿಸಿಟ್ಟುಕೊಳ್ಳುವAತಾಗಬೇಕು ಎಂದರು.

ಕೊಡವ ಹಾಕಿ ಪಂದ್ಯಾವಳಿ ಜಗತ್ತಿನ ಗಮನವನ್ನೇ ಸೆಳೆದಿರುವ ಈ ಸಂದರ್ಭ ಕೊಡಗಿನಲ್ಲಿ ಹಾಕಿ ಇತಿಹಾಸವನ್ನು ಬಿಂಬಿಸುವ ಹಾಕಿ ಕ್ರೀಡಾ ಸಂಗ್ರಹಾಲಯ ರೂಪುಗೊಳ್ಳುವಂತಾಗಬೇಕು ಎಂದೂ ಜೀವನ್ ಸಲಹೆ ನೀಡಿದರು.

ಕೊಡವ ಹಾಕಿ ಪಂದ್ಯಾವಳಿಯ ಮೂಲಕ ಇತ್ತೀಚಿನ ವರ್ಷಗಳಲ್ಲಿ ಯುವ ಆಟಗಾರರಂತೆಯೇ ಯುವ ವೀಕ್ಷಕ ವಿವರಣೆಗಾರರು ಹೊರಹೊಮ್ಮುತ್ತಿರುವುದು ಶ್ಲಾಘನೀಯ ಬೆಳವಣಿಗೆ ಎಂದು ಜೀವನ್ ಹೇಳಿದರು.

ಮುದ್ದಂಡ ಹಾಕಿ ಪಂದ್ಯಾವಳಿ ಆಯೋಜಕ ಸಮಿತಿ ಅಧ್ಯಕ್ಷ ರಶಿನ್ ಸುಬ್ಬಯ್ಯ ಮಾತನಾಡಿ, ಹೊಸ ಪ್ರಯತ್ನವಾಗಿ ಈ ಕೊಡವ ಹಾಕಿ ಪಂದ್ಯಾವಳಿ ಸಾಗಿ ಬಂದ ಹಾದಿಯ ಬಗ್ಗೆ ಸಾಕ್ಷö್ಯ ಚಿತ್ರವನ್ನೂ ನಿರ್ಮಿಸುತ್ತಿದ್ದೇವೆ. ಸೋಷಿಯಲ್ ಮೀಡಿಯಾ ಮೂಲಕ ಯುವಪೀಳಿಗೆಯನ್ನು ಮುದ್ದಂಡ ಹಾಕಿ ಪಂದ್ಯಾವಳಿ ನಿರೀಕ್ಷಗೂ ಮೀರಿ ತಲುಪಿದೆ ಎಂದರು. ಇದೇ ರೀತಿಯ ವಿನೂತನ ಪ್ರಯತ್ನಗಳು ಪ್ರತೀ ವರ್ಷವೂ ಮುಂದುವರೆದರೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜಾಗತಿಕ ಮಟ್ಟದಲ್ಲಿಯೂ ಪ್ರಜ್ವಲಿಸಲು ಸಾಧ್ಯವಿದೆ ಎಂದೂ ರಶಿನ್ ಸುಬ್ಬಯ್ಯ ಹೇಳಿದರು.

ಸ್ಟಿಕ್ ವರ್ಕ್ ಮ್ಯಾಜಿಕ್ ಕೃತಿಯ ಪ್ರಕಾಶಕ, ಪತ್ರಕರ್ತ ಅನಿಲ್ ಹೆಚ್.ಟಿ. ಮಾತನಾಡಿ, ೧ ಸಮುದಾಯ,೧ ನಾಡು, ೧ ಕ್ರೀಡೆ, ನೂರಾರು ತಂಡಗಳು, ಸಾವಿರಾರು ಆಟಗಾರರ ಮೂಲಕ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಬಾರಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮುದ್ದಂಡ ಕುಟುಂಬಸ್ಥರು ಮಹಿಳಾ ಹಾಕಿ ಪಂದ್ಯಾವಳಿಯ ಮೂಲಕ ಮಹಿಳೆಯರಿಗೂ ಆದ್ಯತೆ ನೀಡುವ ಮಹತ್ವದ ಪ್ರಯತ್ನಕ್ಕೆ ಮುದ್ದಂಡ ಹಾಕಿ ಪಂದ್ಯಾವಳಿ ಸಮಿತಿಯವರು ಮುಂದಾಗಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಹೆಸರಾಂತ ಹಾಕಿ ಕ್ರೀಡಾ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ಕೊಡವ ಹಾಕಿ ಪಂದ್ಯಾವಳಿ ಕೇವಲ ಕೊಡವ ಜನಾಂಗದವರಿಗೆ ಮಾತ್ರ ಸೇರಿದ್ದು ಎಂದು ಯಾರೂ ಭಾವಿಸಬಾರದು. ಮಡಿಕೇರಿಯಲ್ಲಿ ಈ ಬಾರಿ ಆಯೋಜಿಸಲ್ಪಟ್ಟಿರುವ ಮುದ್ದಂಡ ಹಾಕಿ ಪಂದ್ಯಾವಳಿಯನ್ನು ಎಲ್ಲಾ ಜನಾಂಗದವರೂ ವೀಕ್ಷಿಸಿ ಪ್ರೋತ್ಸಾಹಿಸುವುದು ಅಗತ್ಯ ಎಂದರು.

ಕೊಡವ ಜನಾಂಗದ ಮೊದಲ ಅಂತರರಾಷ್ಟಿçÃಯ ಹಾಕಿ ಆಟಗಾರ ಮಾಳೆಯಂಡ ಡಿ. ಮುತ್ತಪ್ಪ ವೇದಿಕೆಯಲ್ಲಿದ್ದು ಕೃತಿಗೆ ಶುಭ ಹಾರೈಸಿದರು.

ಇದೇ ಸಂದರ್ಭ ಕೊಡವ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಸಂದರ್ಭ ಮಡಿಕೇರಿಯಲ್ಲಿ ಬೃಹತ್ ಕಲೆಯ ಮೂಲಕ ಹಾಕಿಯ ಬೆಳ್ಳಿ ಹಬ್ಬದ ಸಂಭ್ರಮವನ್ನು ಪ್ರದರ್ಶಿಸಿದ ಮಚ್ಚಾರಂಡ ದೀಪಿಕಾ ಅಪ್ಪಯ್ಯ ಅವರನ್ನು ಗೌರವಿಸಲಾಯಿತು.

ಮಾದೇಟಿರ ಬೆಳ್ಯಪ್ಪ ನಿರೂಪಿಸಿ, ಆಲೆಮಾಡ ಚಿತ್ರಾ ನಂಜಪ್ಪ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಚೆಟ್ಟೀರ ಗ್ರಂಥ ಕಾರ್ಯಪ್ಪ ಪ್ರಾರ್ಥಿಸಿದರು.