ಬೆಂಗಳೂರು, ಏ. ೨೩ : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಸಂಬAಧ ಕಾಂಗ್ರೆಸ್ ಮುಖಂಡ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ತೆನ್ನೀರ ಮೈನಾ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ.
ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಸಂಬAಧ ನಿರೀಕ್ಷಣಾ ಜಾಮೀನಿಗೆ ತೆನ್ನೀರ ಮೈನಾ ಅವರು ಅರ್ಜಿ ಸಲ್ಲಿಸಿದ್ದರು. ಇದೀಗ ತೆನ್ನೀರ ಮೈನಾ ಜಾಮೀನು ಅರ್ಜಿ ವಿಚಾರಣೆ ನಡೆಸಿ ಕೋರ್ಟ್ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ. ಈ ಮೂಲಕ ಇದೀಗ ಕಾಂಗ್ರೆಸ್ ಮುಖಂಡ ತೆನ್ನೀರ ಮೈನಾಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ.
ಕಳೆದ ಏಪ್ರಿಲ್ ೪ರಂದು ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (೩೮) ಬೆಂಗಳೂರಿನಲ್ಲಿ ತಾವು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ಅವರು ವಾಟ್ಸಾö್ಯಪ್‌ನಲ್ಲಿ ಹಾಕಿದ ಸಂದೇಶದಲ್ಲಿ ತಮಗೆ ತೆನ್ನೀರ ಮೈನಾ ಅವರಿಂದ ಪೋಲೀಸರ ಮೂಲಕ ಕಿರುಕುಳ ಆಗುತ್ತಿದ್ದು ಇದಕ್ಕಾಗಿಯೇ ಜಿಗುಪ್ಸೆಗೊಂಡು ಹತಾಶನಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು.
ಪ್ರಕರಣ ದಾಖಲಾದ ನಂತರವೂ ಮೈನಾ ಅವರು ರಾಜಾರೋಷವಾ ಗಿಯೇ ಕೊಡಗಿನಲ್ಲಿ ತಿರುಗಾಡು ತ್ತಿರುವುದು ಬಿಜೆಪಿ ನಾಯಕರಿಂದ ತೀವ್ರ ಟೀಕೆಗೂ ಗುರಿಯಾಗಿತ್ತು.
ಇದೀಗ ಜಾಮೀನು ಅರ್ಜಿಯು ತಿರಸ್ಕೃತಗೊಂಡಿರುವುದರಿAದ ಮೈನಾ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
(ವರದಿ : ಇಂದ್ರೇಶ್)