ವೀರಾಜಪೇಟೆ, ಏ. ೨೩: ಪಟ್ಟಣದ ಮೀನುಪೇಟೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಕಂಚಿ ಕಾಮಾಕ್ಷಿ ಅಮ್ಮನವರ ದೇವಸ್ಥಾನದ ವಾರ್ಷಿಕ ಕರಗೋತ್ಸವ ತಾ. ೨೯ ರಿಂದ ಮೇ ೧ ರವರೆಗೆ ನಡೆಯಲಿದೆ. ತಾ. ೨೯ ರಂದು ಪ್ರಾತಃಕಾಲ ೬ ಗಂಟೆಗೆ ಗಣಪತಿ ಹೋಮ, ಸಂಜೆ ೬ ಗಂಟೆಗೆ ವೀರಾಜಪೇಟೆಯ ಮುಖ್ಯ ಬೀದಿಗಳಲ್ಲಿ ಶ್ರೀ ಕಂಚಿ ಕಾಮಾಕ್ಷಿ ಅಮ್ಮ ಮತ್ತು ಬೀದಿಗಳಲ್ಲಿ ಮಾರಿಯಮ್ಮನವರ ಕರಗಗಳ ಮೆರವಣಿಗೆ, ತದನಂತರ ಪ್ರಸಾದ ವಿನಿಯೋಗ, ತಾ. ೩೦ ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ತದನಂತರ ಅನ್ನಸಂತರ್ಪಣೆ, ರಾತ್ರಿ ೯ ಗಂಟೆಗೆ ಮಾರಿಯಮ್ಮನವರ ಮಹಾಪೂಜೆ, ಅನ್ನಸಂತರ್ಪಣೆ, ಮೇ ೧ ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಮತ್ತು ಮಾರಿಯಮ್ಮ ದೇವಿಯ ವಿಸರ್ಜನೆಯೊಂದಿಗೆ ಕರಗೋತ್ಸವ ಸಂಪನ್ನಗೊಳ್ಳುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.