ಮಡಿಕೇರಿ, ಏ. ೨೩ : ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು ವಲಯ ವತಿಯಿಂದ ೧೬ ವರ್ಷ; ೧೯ ವರ್ಷ ಹಾಗೂ ೨೩ ವರ್ಷದೊಳಗಿನವರ ಕೊಡಗು ಕ್ರಿಕೆಟ್ ತಂಡಕ್ಕೆ ಆಯ್ಕೆ ಶಿಬಿರ ಏರ್ಪಡಿಸಲಾಗಿದೆ.
೧೬ ವರ್ಷದೊಳಗಿನವರಿಗೆ ತಾ. ೨೬ರಂದು ಬೆಳಿಗ್ಗೆ ೮.೩೦ರಿಂದ ಆಯ್ಕೆ ನಡೆಯಲದೆ. ೦೧.೦೯.೨೦೦೯ ಹಾಗೂ ನಂತರ ಜನಿಸಿದವರು ಭಾಗವಹಿಸಬಹುದಾಗಿದೆ. ೨೩ ವರ್ಷದೊಳಗಿನವರಿಗೆ ತಾ. ೨೬ರಂದು ಮಧ್ಯಾಹ್ನ ೨ ಗಂಟೆ ಬಳಿಕ ಆಯ್ಕೆ ನಡೆಯಲಿದೆ. ೧.೯.೨೦೦೨ ಹಾಗೂ ನಂತರ ಜನಿಸಿದವರು ಭಾಗವಹಿಸಬಹುದು. ೧೯ ವರ್ಷದೊಳಗಿನವರಿಗೆ ತಾ. ೨೭ರಂದು ಬೆಳಿಗ್ಗೆ ೮.೩೦ರ ನಂತರ ಆಯ್ಕೆ ನಡೆಯಲಿದೆ. ೧.೯.೨೦೦೬ ಹಾಗೂ ನಂತರ ಜನಿಸಿದವರು ಭಾಗವಹಿಸಬಹುದು. ಆಸಕ್ತರು ಎಲ್ಲ ಮೂಲ ದಾಖಲಾತಿಗಳು ಕ್ರಿಕೆಟ್ ಸಮವಸ್ತçದೊಂದಿಗೆ ನಿಗದಿತ ದಿನಾಂಕದAದು ಮಡಿಕೇರಿ ಕೊಡಗು ವಿದ್ಯಾಲಯ ಮೈದಾನದಲ್ಲಿ ಹಾಜರಿರುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದಾಮೋದರ್ ಗೌಡ ೯೯೪೫೨೭೩೬೮೮ ಇವರನ್ನು ಸಂಪರ್ಕಿಸುವAತೆ ಕೆ.ಎಸ್.ಸಿ.ಎ. ಸಂಯೋಜಕ ರತನ್‌ಕುಮಾರ್ ತಿಳಿಸಿದ್ದಾರೆ.