ಗೋಣಿಕೊಪ್ಪಲು, ಏ. ೨೫: ಗೋಣಿಕೊಪ್ಪಲಿನ ಬರಹಗಾರ್ತಿ ಮತ್ತು ಲೇಖಕಿ ಕೆ.ಟಿ. ವಾತ್ಸಲ್ಯ ಅವರ ಸಂಪಾದಕೀಯದಲ್ಲಿ ಓಯಾಸಿಸ್ ಎಂಬ ಕನ್ನಡ ಮಾಸ ಪತ್ರಿಕೆ ಬಿಡುಗಡೆಗೊಂಡಿದೆ.
ಗೋಣಿಕೊಪ್ಪಲು ಅಕ್ಷಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕುದುಪುಳಿ ಸೋಮಯ್ಯ ಅವರು ತಮ್ಮ ಯೋಗಾಲಯದಲ್ಲಿ ಪತ್ರಿಕೆ ಬಿಡುಗಡೆಗೊಳಿಸಿದರು.
ಮಕ್ಕಳಲ್ಲಿ ಶಿಕ್ಷಣ ಹಕ್ಕು ಬಗ್ಗೆ ಜಾಗೃತಿ ಮೂಡಿಸುತ್ತಿರುವ ಇವರು ಇದುವರೆಗೆ ಸುಮಾರು ೬೫೦೦ ಕಾಗದದ ಲೇಖನಿ ಸ್ವತಃ ತಯಾರಿಸಿ ವಿಶ್ವ ಶಾಂತಿ ಜಾಗೃತಿ ಮೂಡಿಸುತ್ತಿರುವುದು ವಿಶೇಷ.
ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಪಡಿಕಲ್ ಕುಸುಮಾವತಿ ಉಪಸ್ಥಿತರಿದ್ದರು.