ವೀರಾಜಪೇಟೆ, ಏ. ೨೫: ವೀರಾಜಪೇಟೆ ಸಮೀಪದ ಪಾಲಂಗಾಲ ಗ್ರಾಮದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಯಿತು.
ಪಾಲಂಗಾಲ ಗ್ರಾಮದ ಕರಿನೆರವಂಡ ಜಿತನ್ ಅವರ ಮನೆಯೊಳಗೆ ಕಾಳಿಂಗಸರ್ಪ ಸೇರಿಕೊಂಡಿದ್ದನ್ನು ಗಮನಿಸಿದ ಮನೆಯವರು ಸ್ನೇಕ್ ಸತೀಶ್ ಅವರಿಗೆ ಕರೆಮಾಡಿ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸತೀಶ್, ಆಟೋ ಸತೀಶ್ ಮನೆಯೊಳಗೆ ಸೇರಿದ್ದ ೧೨ ಅಡಿ ಉದ್ದದ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ. ಬಳಿಕ ಅದನ್ನು ಮಾಕುಟ್ಟ ಸಮೀಪದ ವಾಟೆಕೊಲ್ಲಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.