ಈ ಸಂದರ್ಭ ಸ್ನೇಹಿತರ ಒಕ್ಕೂಟದ ಸದಸ್ಯರುಗಳಾದ ಡಾ. ಇ. ರಾ ದುರ್ಗಾಪ್ರಸದ್, ಮಾಳೇಟಿರ ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಪುರಸಭೆ ಸದಸ್ಯರಾದ ಮತೀನ್ ಎಸ್.ಹೆಚ್, ಮೊಹಮ್ಮದ್ ರಾಫಿ, ರಾಜೇಶ್ ಪದ್ಮನಾಭ, ಜಲೀಲ್ ಅಹ್ಮದ್, ರಜನಿಕಾಂತ್, ಬೆನ್ನಿಅಗಸ್ಟೀನ್, ನಾಮ ನಿರ್ದೇಶಿತ ಸದಸ್ಯರಾದ ಆತಿಫ್ ಮನ್ನಾ, ಶಾಹುಲ್ ಹಮೀದ್, ಮಾಜಿ ಕೊಡವ ಸಮಾಜ ಮಾಜಿ ಅಧ್ಯಕ್ಷ ವಿ. ನಾಣಯ್ಯ, ವಕೀಲ ಮಾದಂಡ ಪೂವಯ್ಯ, ಆಝಮ್ ಮಸೀದಿ ಅಧ್ಯಕ್ಷ ನಿಸಾರ್ ಅಹ್ಮದ್, ಚೇಂಬರ್ ಆಫ್ ಕಾಮರ್ಸ್ ಪ್ರಮುಖ ಅಮ್ಮುಣಿಚಂಡ ರವಿ, ಸಮಾಜ ಸೇವಕ ಆಫ್ತಬ್, ಎಜಾಜ್ ಅಹ್ಮದ್, ಹಬೀಬ್, ಮೊಹಮ್ಮದ್ ನಯಾಜ್, ಶಫಿಉಲ್ಲ, ಇಮ್ರಾನ್, ಷರೀಫ್, ರಾಫಶಿರ್, ಮತ್ತು ಸೈನಿಕರ ಸಂಘದ ಸದಸ್ಯರುಗಳು ಇದ್ದರು.
ವೀರಾಜಪೇಟೆ, ಏ. ೨೫: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಭಯೋತ್ಪಾದಕ ದಾಳಿಯಿಂದ ಹುತಾತ್ಮರಾದವÀರಿಗೆ ವೀರಾಜಪೇಟೆ ಸ್ನೇಹಿತರ ಒಕ್ಕೂಟದ ವತಿಯಿಂದ ನಗರದ ಗಡಿಯಾರ ಕಂಬದ ಬಳಿ ಮೇಣದಬತ್ತಿ ಹಿಡಿದು ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸುಂಟಿಕೊಪ್ಪ, ಏ.೨೫: ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಂಜೀವಿನಿ ಒಕ್ಕೂಟ ಹಾಗೂ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಉಗ್ರಗಾಮಿಗಳ ದಾಳಿಗೆ ಮೃತಪಟ್ಟವರಿಗೆ ಮೊಂಬತ್ತಿ ಹಿಡಿದು ಸಂತಾಪ ಸೂಚಿಸಿದರು.ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲತಾ ಬಸವರಾಜ್ ನೇತೃತ್ವದಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘಟನೆ ಖಂಡಿಸಿ ಮೃತರ ಭಾವಚಿತ್ರಗಳನ್ನು ಇರಿಸಿ ಪುಷ್ಪಾರ್ಚನೆ ಸಲ್ಲಿಸಿ ಮೊಂಬತ್ತಿ ಬೆಳಗಿಸುವ ಮೂಲಕ ಆತ್ಮಕ್ಕೆ ಶಾಂತಿಕೋರಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಪಿ.ಸೋಮಚಂದ್ರ, ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್, ಸದಸ್ಯರುಗಳಾದ ರಮೇಶ್, ಸಿದ್ಧೀಕ್, ಒಕ್ಕೂಟದ ಸದಸ್ಯರುಗಳಾದ ರಶ್ಮಿ, ಉಷಾ ಶ್ರೀಧರ್, ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.
ಸುಂಟಿಕೊಪ್ಪ,ಏ.೨೫: ಪಟ್ಟಣ ಕನ್ನಡ ವೃತ್ತದಲ್ಲಿ ಪಹಲ್ಗಾಮ್ ಘಟನೆಗೆ ಕೇಂದ್ರ ಸರಕಾರದ ವೈಫಲ್ಯವೆಂದು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಆರೋಪಿಸಿದರು.
ಕನ್ನಡ ವೃತ್ತದಲ್ಲಿ ಸುಂಟಿಕೊಪ್ಪ ಜಮಾಯತ್ ವತಿಯಿಂದ ಮಾನವ ಸರಪಳಿ ನಿರ್ಮಿಸಿ ನಡೆದ ಮೌನ ಪ್ರತಿಭಟನೆಯ ನಂತರ ಮಾತನಾಡಿದ ಅವರು, ಈ ಹಿಂದೆಯೂ ಭಾರತದ ಸೇನೆ ಮತ್ತು ನಾಗರಿಕರ ಮೇಲೆ ಉಗ್ರಗಾಮಿ ದಾಳಿಗಳು ನಡೆದಿದ್ದು ಸರಕಾರದ ಕ್ರಮಗಳು ಸಾಕಾಗಿಲ್ಲ ಎಂದು ಸಾಬೀತ್ತಾಗುತ್ತಿದೆ. ಉಗ್ರಗಾಮಿಗಳು ಯಾವುದೇ ದೇಶಕ್ಕೆ ಸೇರಿದ್ದರೂ ಕೂಡ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಇಬ್ರಾಹಿಂ ಹ್ಯಾಸನಿ ಖತ್ತೀಬ್, ರಜಾಕ್ ಸಹದಿ, ಜಮಾತ್ ಕಾರ್ಯದರ್ಶಿ ಅದ್ದೂಸ, ಮದರಸ ಅಧ್ಯಕ್ಷ ಆಶ್ರಫ್ ಹೂತ್, ಕಾರ್ಯದರ್ಶಿ ಶರೀಫ್ ಮತ್ತಿತರರು ಇದ್ದರು.