ಕಡಂಗ, ಏ. ೨೫: ಎಸ್‌ಕೆಎಸ್‌ಎಸ್‌ಎಫ್ ಮತ್ತು ಎಸ್‌ವೈಎಸ್ ಕಡಂಗ ಶಾಖಾ ವತಿಯಿಂದ ೩ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ತಾ. ೨೬ ರಂದು ನಡೆಯಲಿದ್ದು, ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮತ್ತು ದುಆ ಕಾರ್ಯಕ್ರಮವನ್ನು ಕಡಂಗ ಕೊಕ್ಕಂಡಬಾಣೆ ದರ್ಗಾದಲ್ಲಿ ನಡೆಸಲಾಯಿತು.
ಈ ಸಂದರ್ಭ ಖತೀಬ್ ಉಸ್ತಾದರಾದ ರಫೀಕ್ ಲತೀಫಿ, ಜಮಾಅತ್ ಅಧ್ಯಕ್ಷ ಅಬ್ದುಲ್ಲಾ, ಯುಸಫ್ ಮುಸ್ಲಿಯಾರ್, ಕಾರ್ಯದರ್ಶಿಗಳಾದ ಅಬ್ದುಲ್ ರೆಹಮಾನ್, ರಜಾಕ್, ಸಿದ್ದಿಕ್, ಶಿಹಾಬ್ ಸಮ್ಮದ್, ಇಸಾಕ್, ಗ್ರಾಮ ಪಂಚಾಯಿತಿ ಸದಸ್ಯ ಸುಬೀರ್ ಸಿ.ಇ. ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.