ನಾಪೋಕ್ಲು, ಏ. ೨೫ : ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದುಷ್ಕೃತ್ಯ ಖಂಡಿಸಿ ಶುಕ್ರವಾರ ನಾಪೋಕ್ಲು ಪಟ್ಟಣದ ಬಸ್ ನಿಲ್ದಾಣದಲ್ಲಿ ಹಿಂದೂಪರ ಸಂಘಟನೆಗಳಿAದ ದೇಶದ್ರೋಹಿಗಳಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತು.

ಕಾಫಿ ಬೆಳೆಗಾರ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾತನಾಡಿ, ಪೆಹಲ್ಗಾಮ್‌ನಲ್ಲಿ ಅಮಾಯಕ ಹಿಂದೂಗಳ ಹತ್ಯೆ ಖಂಡನೀಯ. ದೇಶದಲ್ಲಿ ಹಿಂದೂಗಳ ಮೇಲೆ ಪದೇ ಪದೇ ದೌರ್ಜನ್ಯ ನಡೆಸಲಾಗುತ್ತಿದೆ. ಭಾರತೀಯರು ಯಾರಿಗೂ ತೊಂದರೆ ಮಾಡಿದ ನಿದರ್ಶನಗಳಿಲ್ಲ. ದೇಶವನ್ನು ಕೊಳ್ಳೆ ಹೊಡೆಯಲು ಬಂದವರು ಸಂಪತ್ತನ್ನು ದೋಚಿದರು. ಇದೀಗ ಧರ್ಮದ ಮೇಲೆ ಯುದ್ಧವನ್ನು ಸಾರುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಭಟನೆ ಸಂದರ್ಭ ಪ್ರಮುಖರಾದ ಕಂಗಾAಡ ಜಾಲಿ ಪೂವಪ್ಪ, ಬಿ.ಎಂ. ಪ್ರತೀಪ, ಬಿದ್ದಾಟಂಡ ತಮ್ಮಯ್ಯ, ರಾಧಾಕೃಷ್ಣ ರೈ, ಕೇಲೇಟಿರ ದೀಪು ದೇವಯ್ಯ. ಕೇಟೋಳಿರ ಹರೀಶ್ ಪೂವಯ್ಯ, ಕೇಲೇಟಿರ ದೀಪು ದೇವಯ್ಯ, ಬಿದ್ದಾಟಂಡ ಜಿನ್ನು ನಾಣಯ್ಯ, ಸಂಪತ್, ಅಮ್ಮಂಡ ಮಹೇಶ್, ಕೇಲೇಟಿರ ಸಾಬು ನಾಣಯ್ಯ, ಮೂವೆರ ಪಟ್ಟು ಪೆಮ್ಮಯ್ಯ, ಶಿವಚಾಳಿಯಂಡ ಜಗದೀಶ್, ಉಮಾ ಪ್ರಭು, ಎಂ.ಎA. ನರೇಂದ್ರ, ಬೊಳ್ಯಪಂಡÀ ಜಾನ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ನಾಟೋಳಂಡ ಸಚಿನ್, ಬಾಳೆಯಡ ಮೇದಪ್ಪ, ಕೇಟೋಳಿರ ಗಣಪತಿ ಮತ್ತಿತರರು ಇದ್ದರು.