ವೀರಾಜಪೇಟೆ, ಏ. ೨೫: ಹುಬ್ಬಳ್ಳಿಯ ಉಮಾ ಶಂಕರ ಪ್ರತಿಷ್ಠಾನದಿಂದ ನೀಡಲಾಗುವ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಮಡಿಕೇರಿಯ ಕೆ. ಜಯಲಕ್ಷಿ÷್ಮ ಅವರ ‘ಮತ್ತೆ ವಸಂತ’ ಕಥಾ ಸಂಕಲನ ಆಯ್ಕೆಯಾಗಿದ್ದು, ಹುಬ್ಬಳ್ಳಿಯಲ್ಲಿ ಮೇ ೧೧ ರಂದು ನಡೆಯಲಿರುವ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೆ. ಜಯಲಕ್ಷಿö್ಮ ಅವರು ಮಡಿಕೇರಿಯ ಸಂತ ಜೋಸೆಫರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಪ್ರಧಾನ ಸಂಚಾಲಕಿ ಹಾಗೂ ಕೊಡಗು ಜಾನಪದ ಪರಿಷತ್‌ನ ನಿರ್ದೇಶಕಿಯಾಗಿದ್ದಾರೆ. ಇವರು ಮಡಿಕೇರಿಯ ಜೀವ ವಿಮಾ ನಿಗಮದ ಉದ್ಯೋಗಿ ವಿ.ಹೆಚ್. ಜಯಕುಮಾರ್ ಅವರ ಪತ್ನಿ.