ಗೋಣಿಕೊಪ್ಪಲು, ಏ. ೨೫: ಅಮ್ಮಕೊಡವ ಕ್ರಿಕೆಟ್ ನಮ್ಮೆ ತಾ. ೨೬ ಹಾಗೂ ೨೭ ರಂದು ಹಾತೂರು ಶಾಲಾ ಮೈದಾನದಲ್ಲಿ ನಡೆಯಲಿದ್ದು, ಅಂತಿಮ ಸಿದ್ಧತೆ ಭರದಿಂದ ಸಾಗುತ್ತಿದೆ. ೧೯ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಬೇಗೂರು, ಬಲ್ಲಮಾವಟಿ, ಪೋಕಳತೋಡು ಹಾಗೂ ಚೇರಂಬಾಣೆಯಲ್ಲಿ ಕೊಂಡಿAಜಮ್ಮನ ಕುಟುಂಬಸ್ಥರು ವಾಸ ಮಾಡುತ್ತಿದ್ದಾರೆ. ಕುಟುಂಬದಲ್ಲಿ ೫೪ ಜನಸಂಖ್ಯೆ ಹೊಂದಿದ್ದರೂ ಕ್ರಿಕೆಟ್ ನಮ್ಮೆಯ ಆತಿಥ್ಯವನ್ನು ವಹಿಸಿದೆ.
ಉದ್ಘಾಟನಾ ಕಾರ್ಯಕ್ರಮವು ತಾ.೨೬ರ ಮುಂಜಾನೆ ೮.೩೦ಕ್ಕೆ ಸಮುದಾಯ ಬಾಂಧವರ ಪಥ ಸಂಚಲನವು ಸಾಂಪ್ರದಾಯಿಕ ಉಡುಪಿನಲ್ಲಿ ಮೈದಾನದ ಆವರಣದಲ್ಲಿ ನಡೆಯಲಿದೆ. ಕೊಂಡಿAಜಮ್ಮನ ಅಮ್ಮಕೊಡವ ಕ್ರಿಕೆಟ್ ನಮ್ಮೆಯ ಅಧ್ಯಕ್ಷ ಕೆ.ಎ. ಪೊನ್ನಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪೃಥ್ವಿ, ಅಕ್ರಮ ಸಕ್ರಮ ಸಮಿತಿಯ ತಾಲೂಕು ಅಧ್ಯಕ್ಷ ನೆರವಂಡ ಉಮೇಶ್, ಅಮ್ಮಕೊಡವ ಸಮಾಜದ ಬೆಂಗಳೂರು ಅಧ್ಯಕ್ಷ ಹೆಮ್ಮಚ್ಚಿಮನೆ ಸರಸ್ವತಿ ಸೋಮೇಶ್, ಮೈಸೂರಿನ ಅಮ್ಮಕೊಡವ ಸಮಾಜದ ಅಧ್ಯಕ್ಷ ಎನ್.ಯು. ಸಂತೋಷ್ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ ತಾ.೨೭ರ ಸಂಜೆ ೪.೩೦ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪೃಥ್ವಿ, ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ನಾಳ್ಯಮ್ಮಂಡ ಉಮೇಶ್ ಕೇಚಮಯ್ಯ, ಮಾಯಮುಡಿ ಕಂಗಳತ್ನಾಡ್ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಆಶಾ ಸೂದನ್, ಕೋತೂರು ಅನ್ನಪೂರ್ಣೇಶ್ವರಿ ಅಮ್ಮಕೊಡವ ಮಹಿಳಾ ಸಂಘದ ಅಧ್ಯಕ್ಷ ಶ್ವೇತಾ ರವಿ ಮನ್ನಕ್ಕಮನೆ, ಕೋತೂರು ಶ್ರೀಕೃಷ್ಣ ಅಮ್ಮ.ಕೊಡವ ಸಂಘದ ಅಧ್ಯಕ್ಷ ರವಿ ಮನ್ನಕ್ಕಮನೆ, ಪೊನ್ನಂಪೇಟೆ ಕಾವೇರಿ ಅಮ್ಮಕೊಡವ ಮಹಿಳಾ ಸಂಘದ ಅಧ್ಯಕ್ಷೆ ರೇವತಿ ಪರಮೇಶ್ವರ, ಮಡಿಕೇರಿಯ ಅಮ್ಮಕೊಡವ ಸಮಾಜದ ಅಧ್ಯಕ್ಷ ನಾಳ್ಯಮಂಡ ಪಾಲಾಕ್ಷ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.
ಕೊಂಡಿAಜಮ್ಮನ ಕ್ರಿಕೆಟ್ ಕಪ್ ಆಯೋಜಕರಾಗಿರುವ ಕೆ.ಎಂ. ಬಾಲಕೃಷ್ಣ ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ದುಡಿಯುತ್ತಿದ್ದಾರೆ.