ರೂ. ೨.೧೨ ಲಕ್ಷ ಲಾಭ

ಕೂಡಿಗೆ, ಏ. ೨೫: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೆ ಸುಂಕ ಎತ್ತುವಳಿ, ಆನೆ ಕೆರೆ ಮೀನು ಸಾಕಾಣೆಯ ಮೂಲಕ ಹಿಡಿದು ಮಾರಾಟ ಸೇರಿದಂತೆ ಆಡು, ಕೋಳಿ, ಹಂದಿ ಮಾಂಸದ ಅಂಗಡಿಗಳ ಲೈಸೆನ್ಸ್ಗಳು ಸೇರಿದಂತೆ ಹರಾಜು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗೆ ಕಳೆದ ಸಾಲಿಗಿಂತ ರೂ. ೨.೧೨. ಲಕ್ಷ ಲಾಭಾಂಶ ಬಂದಿದೆ.

ಈ ಸಾಲಿನಲ್ಲಿ ಆನೆ ಕೆರೆ ಮೀನು ಸಾಕಾಣೆಗೆ ಸಂಬAಧಿಸಿದAತೆ ರೂ. ೪ ಲಕ್ಷ, ಸಂತೆ ಸುಂಕ ಎತ್ತುವಳಿ ರೂ. ೪.೭೨ ಲಕ್ಷಗಳಿಗೆ ಹರಾಜು ಪ್ರಕ್ರಿಯೆ ನಡೆದಿದೆ. ಹರಾಜು ಪ್ರಕ್ರಿಯೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಅಭಿವೃದ್ಧಿ ಅಧಿಕಾರಿ ಸಂತೋಷ್ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ನೆರವೇರಿಸಲಾಯಿತು.