ಪೊನ್ನAಪೇಟೆ, ಏ. ೨೫: ತಾ. ೨೭ ರಿಂದ ಮೇ ೪ ರವರೆಗೆ ಪೊನ್ನಂಪೇಟೆ ತಾಲೂಕಿನ ಮಾಪಿಳ್ಳೆ ತೋಡು ಗ್ರಾಮದಲ್ಲಿ ನಡೆಯಲಿರುವ ಕೊಡವ ಮುಸ್ಲಿಂ ಕುಟುಂಬ ತಂಡಗಳ ನಡುವಿನ ‘ಆಲೀರ ಕಪ್’ ಕ್ರಿಕೆಟ್ ಪಂದ್ಯಾವಳಿಗೆ ಭರದ ಸಿದ್ದತೆಗಳು ನಡೆಯುತ್ತಿವೆ.
ಆಲೀರ ಕುಟುಂಬದ ತಕ್ಕ ಮುಖ್ಯಸ್ಥ ಆಲೀರ ಎರ್ಮು ಹಾಜಿ ಹಾಗೂ ಬೇಗೂರಿನ ತಕ್ಕಮುಖ್ಯಸ್ಥ ಆಲೀರ ಕೂಟಿಯಾಲಿ ಅವರ ಮಾರ್ಗದರ್ಶನದಲ್ಲಿ ಆಲೀರ ಕಪ್ ಕ್ರಿಕೆಟ್ ಪಂದ್ಯಾವಳಿಯ ಯಶಸ್ಸಿಗಾಗಿ ಕುಟುಂಬದ ಹಿರಿಯರು ಮತ್ತು ಕಿರಿಯರು ಶ್ರಮಿಸುತ್ತಿದ್ದಾರೆ. ಮಾಪಿಳ್ಳೆತೋಡಿನ ಆಲೀರ ಕುಟುಂಬಸ್ಥರಿಗೆ ಸೇರಿದ ಗದ್ದೆಯನ್ನು ಸಮತಟ್ಟುಗೊಳಿಸಿ, ಪಂದ್ಯಾವಳಿಗೆ ಮೈದಾನವನ್ನು ಸಜ್ಜುಗೊಳಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಗೆ ಈಗಾಗಲೇ ೭೦ ತಂಡಗಳು ಹೆಸರು ನೊಂದಾಯಿಸಿಕೊAಡಿದ್ದು, ಪ್ರಶಸ್ತಿಗಾಗಿ ರೋಚಕ ಹಣಾಹಣಿ ನಡೆಸಲಿವೆ. ತಾ. ೨೭ ರಂದು ಆರಂಭಗೊಳ್ಳಲಿರುವ ಆಲೀರ ಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಬೆಂಗಳೂರು ಶಾಂತಿನಗರದ ಶಾಸಕ ಎನ್.ಎ. ಹ್ಯಾರಿಸ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮೇ ೪ ರಂದು ಸಮಾರೋಪ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಬೋಸರಾಜು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತÀರ್ ಗೌಡ, ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಬಗ್ಗೆ ಆಲೀರ ಕುಟುಂಬದ ಅಧ್ಯಕ್ಷ ಆಲೀರ ಪವಿಲ್ ಅವರು ಮಾತನಾಡಿ, ಎಂಟು ದಿನಗಳ ಕಾಲ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗೆ ಈಗಾಗಲೇ ೭೦ ತಂಡಗಳು ಹೆಸರು ನೋಂದಾಯಿಸಿಕೊAಡಿದ್ದು, ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ. ೧,೧೧,೧೧೧ ನಗದು ಬಹುಮಾನ ದೊಂದಿಗೆ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೫೫,೫೫೫ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ತೃತೀಯ ಸ್ಥಾನ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಪ್ರತಿ ಪಂದ್ಯಕ್ಕೆ ಮ್ಯಾನ್ ಆಫ್ ದಿ ಮ್ಯಾಚ್, ಪ್ರತಿ ಪಂದ್ಯದ ಟಾಸ್ ವಿನ್ನರ್‌ಗೆ ಬೆಳ್ಳಿ ನಾಣ್ಯ ಹಾಗೂ ಅಂತಿಮ ಪಂದ್ಯಾಟದ ಟಾಸ್ ವಿನ್ನರ್‌ಗೆ ಚಿನ್ನದ ನಾಣ್ಯ ನೀಡಲಾಗುತ್ತದೆ. ಪಂದ್ಯಾಟದ ಮ್ಯಾನ್ ಆಫ್ ದಿ ಸೀರೀಸ್ ಪಡೆದವರಿಗೆ ಡಿಯೋ ಬೈಕ್ ಅನ್ನು ಬಹುಮಾನ ವಾಗಿ ನೀಡ ಲಾಗುವುದು ಎಂದರು. ಪಂದ್ಯಾವಳಿಯ ಕ್ರೀಡಾಸಮಿತಿಯ ಕಾರ್ಯದರ್ಶಿ ಆಲೀರ ಮಹಮ್ಮದ್ ರಫೀಕ್ ಮಾತನಾಡಿ, ೨೦೨೪ರಲ್ಲಿ ಕೊಡವ ಮುಸ್ಲಿಂ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಕುವೆಲರ ಕುಟುಂಬಸ್ಥರು ಚಾಮಿಯಾಲದಲ್ಲಿ ನಡೆಸಿದ್ದರು. ಇದರಲ್ಲಿ ಸುಮಾರು ೬೫ ತಂಡಗಳು ಪಾಲ್ಗೊಂಡಿದ್ದವು. ಎರಡನೇ ವರ್ಷ ಆಲೀರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ೭೦ ತಂಡಗಳು ಹೆಸರು ನೋಂದಾಯಿಸಿ ಕೊಂಡಿವೆ. ಕೊಡಗು ಪತ್ರಕರ್ತರ ಸಂಘದ ತಂಡ ಹಾಗೂ ಸ್ಥಳೀಯ ತಂಡದೊAದಿಗೆ ಪ್ರದರ್ಶನ ಪಂದ್ಯ ನಡೆಯಲಿದೆ ಎಂದರು. ಆಲೀರ ಕುಟುಂಬದ ಖಜಾಂಚಿ ಆಲೀರ ಹ್ಯಾರಿಸ್ ಮಾತನಾಡಿ, ಕ್ರಿಕೆಟ್ ಹಬ್ಬಕ್ಕೆ ಕುಟುಂಬದ ಹಿರಿಯರ ಮಾರ್ಗದರ್ಶನ ದೊಂದಿಗೆ ಹಾಗೂ ಸಂಘದ ಅಧ್ಯಕ್ಷರು ಮತ್ತು ಸದಸ್ಯರ ಶ್ರಮದಿಂದ ಮೈದಾನ ಸಜ್ಜುಗೊಂಡಿದೆ. ದಾನಿಗಳು ಹಾಗೂ ಸಂಘ-ಸAಸ್ಥೆಗಳ ಸಹಕಾರದಿಂದ ಸುಮಾರು ೧೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕ್ರೀಡಾಕೂಟ ಆಯೋಜನೆ ಗೊಳಿಸಲಾಗಿದೆ. ಕ್ರೀಡಾಕೂಟದ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯವೆಂದರು. ಈ ಸಂದರ್ಭ ಅಲೀರ ಕುಟುಂಬದ ಉಪಾಧ್ಯಕ್ಷ ಅಲೀರ ಎ.ಹೆಚ್. ಅಬ್ದುಲಾ, ಅಲೀರ ಉಸ್ಮಾನ್, ಅಲೀರ ನಸೀರ್ ಹಾಗೂ ಆಲೀರ ಕುಟುಂಬದ ಸದಸ್ಯರು ಹಾಜರಿದ್ದರು.