ಮಡಿಕೇರಿ, ಏ. ೨೫: ವಿಶ್ವ ಭೂ ದಿನ-೨೦೨೫ರ ಅಂಗವಾಗಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಕೊಡಗು ಜಿಲ್ಲಾಡಳಿತ, ಮಡಿಕೇರಿ ನಗರಸಭೆ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಹೋಂ-ಸ್ಟೇ ಆಸೋಸಿಯೇಷನ್, ಹೊಟೇಲ್ ಆಸೋಸಿಯೇಷನ್, ಟೂರ್ - ಟ್ರಾವೆಲ್ಸ್ ಆಸೋಸಿಯೇಷನ್ ಹಾಗೂ ಪ್ರವಾಸೋದ್ಯಮ ಪಾಲುದಾರರ ಸಹಯೋಗದಲ್ಲಿ ತಾ. ೨೨ ರಂದು ಮಡಿಕೇರಿ ಕೋಟೆ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು.