ಗೋಣಿಕೊಪ್ಪಲು, ಏ. ೨೫: ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೧೯ನೇ ದಿನ ೭ ತಂಡಗಳು ಮುನ್ನಡೆ ಸಾಧಿಸಿದವು. ರೋಚಕ ಹಣಾಹಣಿಯಲ್ಲಿ ಪರಾಜಿತಗೊಂಡ ತಂಡಗಳು ಅಲ್ಪಮೊತ್ತಗಳಿಂದ ವಿರೋಚಿತ ಸೋಲಿಗೆ ಶರಣಾದವು.
ಪೋರಂಗಡ ವಿರುದ್ಧ ಅಣ್ಣಳಮಾಡ (ಪೂಕೊಳ) ಜಯ ಸಾಧಿಸಿತು. ಅಣ್ಣಳಮಾಡ ತಂಡ ತನ್ನ ೧ ವಿಕೆಟ್ ಕಳೆದುಕೊಂಡು ೪೭ ರನ್ ಗಳಿಸಿತು. ಗುರಿ ಬೆನ್ನತ್ತಿದ ಪೋರಂಗಡ ೫ ವಿಕೆಟ್ ಕಳೆದುಕೊಂಡು ೪೫ ರನ್ ಗಳಿಸಿ ಸೋಲಿಗೆ ಶರಣಾಯಿತು.
ಚಿಂಡಮಾಡ ವಿರುದ್ಧ ನಾಮೇರ ಪರಾಭವಗೊಂಡಿತು. ಮೊದಲು ಬ್ಯಾಟ್ ಮಾಡಿದ ಚಿಂಡಮಾಡ ೨ ವಿಕೆಟ್ ನಷ್ಟಕ್ಕೆ ೫೫ ರನ್ ಪೇರಿಸಿತು. ಗುರಿ ಬೆನ್ನತ್ತಿದ ನಾಮೇರ ಪ್ರಬಲ ಪೈಪೋಟಿ ನೀಡಿತಾದರೂ ೫೩ ರನ್ ಬಾರಿಸಿ ೨ ರನ್‌ಗಳ ಅಂತರದ ವಿರೋಚಿತ ಸೋಲು ಅನುಭವಿಸಿತು.
ನಂದಿರ ತಂಡದ ೫೮ ರನ್‌ಗಳ ಗುರಿ ಹಿಂದೆ ಸಾಗಿದ ಮುಂಡಚಾಡಿರ ೬ ವಿಕೆಟ್ ಕಳೆದುಕೊಂಡು ೪೭ ರನ್ ಗಳಿಸಿ ಪರಾಜಯಗೊಂಡಿತು.
ಕೊಂಗAಡ ವಿರುದ್ಧ ಬೊಟ್ಟೋಳಂಡ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟಿಂಗ್ ಮಾಡಿದ ಬೊಟ್ಟೋಳಂಡ ೫ ವಿಕೆಟ್ ಕಳೆದುಕೊಂಡು ೫೩ ರನ್‌ಗಳ ಗುರಿ ನೀಡಿತು. ಕೊಂಗAಡ ೩ ವಿಕೆಟ್ ಕಳೆದುಕೊಂಡು ೫೦ ರನ್ ಬಾರಿಸಿ ಅಲ್ಪಮೊತ್ತಗಳ ಅಂತರದಿAದ ಟೂರ್ನಿಯಿಂದ ಸೋತು ನಿರ್ಗಮಿಸಿತು.
ಒಂದು ರನ್‌ಗಳ ಅಂತರದಿAದ ಕೊಡಂದೇರ ಚೆನ್ನಪಂಡ ವಿರುದ್ಧ ಸೋಲಿಗೊಳಗಾಯಿತು. ಚೆನ್ನಪಂಡ ನೀಡಿದ್ದ ೪೮ ರನ್ ಗುರಿಯನ್ನು ಬೆನ್ನತ್ತಿದ ಕೊಡಂದೇರ ತೀವ್ರ ಹೋರಾಟ ನಡೆಸಿದರೂ ಓವರ್‌ಗಳ ಅಂತ್ಯಕ್ಕೆ ೧ ವಿಕೆಟ್ ಕಳೆದುಕೊಂಡು ೪೭ ರನ್ ದಾಖಲಿಸಿ ಸೋಲೊಪ್ಪಿ ಕೊಂಡಿತು. ಚೊಟ್ಟೆಯಂಡಮಾಡ ಹಾಗೂ ಬಡುವಂಡ ನಡುವಿನ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೊಟ್ಟೆಯಂಡಮಾಡ ೩ ವಿಕೆಟ್ ನಷ್ಟಕ್ಕೆ ೧೫ ರನ್ ದಾಖಲಿಸಿತು. ಅಲ್ಪಮೊತ್ತವನ್ನು ಬೆನ್ನತ್ತಿದ ಬಡುವಂಡ ೧೩ ರನ್ ಮಾತ್ರ ಬಾರಿಸಿ ಗುರಿ ಮುಟ್ಟುವಲ್ಲಿ ವಿಫಲಗೊಂಡು ಸೋಲು ಕಾಣಬೇಕಾಯಿತು.
ಚೇಂದಿರ ವಿರುದ್ಧ ಕರಿನೆರವಂಡ ವಿಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಕರಿನೆರವಂಡ ೧ ವಿಕೆಟ್ ಕಳೆದುಕೊಂಡು ೪೨ ರನ್ ಗಳಿಸಿತು. ಚೇಂದಿರ ೪೧ ರನ್ ಗಳಿಸಿ ಪರಾಜಿತಗೊಂಡಿತು.
- ಹೆಚ್.ಕೆ.ಜಗದೀಶ್