ಐಗೂರು, ಏ. ೨೫: ಬೇಳೂರು ಬಸವನಳ್ಳಿ ಗ್ರಾಮದ ಕಾರೆಕೊಪ್ಪದ ಹಾಲೇರಿ ಬಸವೇಶ್ವರ, ಉಚ್ಛ ಬಸವೇಶ್ವರ ಮತ್ತು ಪಟ್ಟದಮ್ಮ ದೇವಾಲಯ ಆಡಳಿತ ಮಂಡಳಿ ಯನ್ನು ರಚಿಸಲಾಯಿತು. ಕೊಟ್ಟಿಗೆಮನೆ ರಾಜಣ್ಣ ಅಧ್ಯಕ್ಷರಾಗಿ ಮತ್ತು ಕೆ.ಎ. ಪ್ರಶಾಂತ್ ಕುಮಾರ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸದಸ್ಯರಾಗಿ ನಂದೀಶ ಬಸವನಳ್ಳಿ, ವಿಜಯಕುಮಾರ್, ಮಂಜುನಾಥ್ ಬಿ.ಎಂ, ಉಮೇಶ್ ಎ.ಕೆ., ಮಾದಪ್ಪ, ರವಿ ಬಿ.ಜಿ., ಪರಮೇಶ ಕೆ.ಎ., ಚಂಗಪ್ಪ ಎ.ಬಿ., ಸುರೇಶ ಕೆ.ಪಿ., ಬಸವರಾಜು ಬಿ.ಎಂ. ಮತ್ತು ಬಿ.ಬಿ. ಲೋಕೇಶ್ ಆಯ್ಕೆಯಾದರು.