ಗುಡ್ಡೆಹೊಸೂರು, ಏ. ೨೬: ಕಾಶ್ಮೀರದಲ್ಲಿ ಭಯೋತ್ಪದಕರ ದಾಳಿಯಿಂದ ಮೃತರಾದವರ ಆತ್ಮಕ್ಕೆ ಶಾಂತಿ ಕೋರಿ ಗುಡ್ಡೆಹೊಸೂರಿನಲ್ಲಿ ಹಿಂದೂಪರ ಸಂಘಟನೆಗಳಿAದ ದೀಪ ಬೆಳಗಿಸಿ ಮಾನವ ಸರಪಳಿ ನಿರ್ಮಿಸಿ, ಮೌನ ಆಚರಿಸಿ ಶ್ರದ್ದಾಂಜಲಿ ಅರ್ಪಿಸಲಾಯಿತು. ಈ ಸಂದರ್ಭ ನೂರಾರು ಮಂದಿ ಹಾಜರಿದ್ದರು. ಮಾಜಿ ಸೈನಿಕ ಅಧಿಕಾರಿ ರಮೇಶ್ ಅವರು ದಾಳಿಯ ಬಗ್ಗೆ ವಿವರಿಸಿದರು.