ಮಡಿಕೇರಿ, ಏ. ೨೬: ಐರಿ ಜನಾಂಗದ ೧೧ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ನಮ್ಮೆ ಅಮ್ಮಣಂಡ ಕಪ್‌ನ ಸಮಾರೋಪ ಸಮಾರಂಭ ತಾ. ೨೭ ರಂದು (ಇಂದು) ಅಪರಾಹ್ನ ೩ ಗಂಟೆಗೆ ನಡೆಯಲಿದೆ.

ಮೂರ್ನಾಡು ಬಾಚೇಟ್ಟಿರ ದಿ. ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಐರಿ ಸಮಾಜ ಅಧ್ಯಕ್ಷ ಮೇಲತಂಡ ರಮೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚೀರ ಸುಭಾಷ್ ನಾಣಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಲೇರ ಚರಣ್, ಅಮ್ಮಣಂಡ ಕುಟುಂಬದ ಪಟ್ಟೆದಾರ ಸುಬ್ಬಯ್ಯ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ಜನಾಂಗದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ - ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯ ನಡೆಯಲಿದೆ ಎಂದು ಅಮ್ಮಣಂಡ ಕಪ್ ಕ್ರೀಡಾ ಸಮಿತಿಯ ಅಮ್ಮಣಂಡ ನಿಖಿಲ್ ನಿರಂಜನ್ ಹಾಗೂ ದೀಪಕ್ ಪೂಣಚ್ಚ ತಿಳಿಸಿದ್ದಾರೆ.