ಕುಶಾಲನಗರ, ಏ. ೨೬: ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಂಘದ ಪದಾಧಿಕಾರಿ ಗಳು ಕಾಶ್ಮೀರದಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕುಶಾಲನಗರ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅಧ್ಯಕ್ಷ ವಿ.ಎಂ. ವಿಜಯ್ ಕಾಶ್ಮೀರದಲ್ಲಿ ನಡೆದಿರುವುದು ಹೇಯ ಕೃತ್ಯವಾಗಿದೆ. ಮೃತಪಟ್ಟ ಪ್ರವಾಸಿಗರಿಗೆ ಸಂಘ ಶ್ರದ್ಧಾಂಜಲಿ ಅರ್ಪಿಸುವುದರೊಂದಿಗೆ ಸಂತಾಪ ಸೂಚಿಸುತ್ತಿದೆ. ಕೇಂದ್ರ ಹಾಗೂ ಕಾಶ್ಮೀರ ಸರ್ಕಾರಗಳು ಉಗ್ರರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದರು.

ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷರಾದ ಟಿ.ಕೆ. ಸುಧೀರ್, ಪ್ರಧಾನ ಕಾರ್ಯದರ್ಶಿ ಎನ್.ವಿ. ಉಣ್ಣಿಕೃಷ್ಣನ್, ಖಜಾಂಚಿ ಕೆ. ಬಾಬು ಗೌರವ ಸಲಹೆಗಾರ ಟಿ ಆರ್ ವಾಸುದೇವ್ ವೀರಾಜಪೇಟೆ ತಾಲೂಕು ಅಧ್ಯಕ್ಷ ವಿನೂಪ್, ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ಅಜೀಶ್ ಕುಮಾರ್, ಮುತ್ತಪ್ಪ ಮಲಯಾಳ ಸಂಘದ ಅಧ್ಯಕ್ಷ ಸುಮೇಶ್, ಒಂಟಿಯAಗಡಿ ಘಟಕದ ಅಧ್ಯಕ್ಷ ನಂದಕುಮಾರ್ ಸುಂಟಿಕೊಪ್ಪ ಘಟಕದ ಅಧ್ಯಕ್ಷ ಶಶಿಕುಮಾರ್, ಮುರ್ನಾಡು ಅಧ್ಯಕ್ಷ ಬಿಜುರಾಜು ಮತ್ತು ನಿರ್ದೇಶಕರುಗಳು ಇದ್ದರು.