ಮಡಿಕೇರಿ, ಏ. ೨೬ : ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವವು ಮೇ ೧ ರಿಂದ ೩ರವರಗೆ ಮೂರ್ನಾಡು ಜೂನಿಯರ್ ಕಾಲೇಜಿನ ಬಾಚೆಟ್ಟಿರ ದಿ. ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಕ್ರಿಕೆಟ್, ಪುರುಷರು ಮತ್ತು ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಹಗ್ಗ ಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಗಳು ನಡೆಯಲಿದೆ. ಕ್ರೀಡೋತ್ಸವಕ್ಕೆ ಮೇ ೧ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಕುಲಪತಿ ಡಾ. ಪಡಿಞರಂಡ ಚಂಗಪ್ಪ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಕೊರಕುಟ್ಟೀರ ಸರಾ ಚಂಗಪ್ಪ ವಹಿಸಲಿದ್ದಾರೆ. ಈ ಸಂದರ್ಭ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಗೆ ಮುಖ್ಯಮಂತ್ರಿಗಳ ಪದಕ ಪಡೆದ ಇಬ್ಬರು ಪೋಲಿಸ್ ಸಬ್‌ಇನ್ಸ್ಪೆಕ್ಟರ್‌ಗಳಾದ ತುದಿಮಾಡ ಸವಿ ಲೋಕೇಶ್ ಮತ್ತು ಚಂಗಚAಡ ನಿತಿನ್ ಮಾಚಯ್ಯ ಅವರನ್ನು ಹಾಗೂ ಅಗ್ನಿ ಶಾಮಕದಳದಲ್ಲಿ ವಿಪತ್ತು ನಿರ್ವಾಹಣೆಯಲ್ಲಿನ ಉತ್ತಮ್ಮ ಸೇವೆಗೆ ಮುಖ್ಯಮಂತ್ರಿಗಳ ಪದಕ ಪಡೆದ ಮಚ್ಚಂಡ ನಂಜಪ್ಪ ಇವರಗಳನ್ನು ಸನ್ಮಾನಿಸಲಾಗುವುದು.

ಕ್ರೀಡೋತ್ಸವದ ಫೈನಲ್ ಪಂದ್ಯಗಳು ಮೇ ೩ರಂದು ಅಪರಾಹ್ನ ೨.೩೦ ಗಂಟೆಗೆ ನಡೆಯಲಿದೆ. ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರಾಟೆಪಟು, ವಿಧಾನಪರಿಷತ್ ಮಾಜಿ ಸದಸ್ಯ ಚೆಪ್ಪುಡೀರ ಅರುಣ್ ಮಾಚಯ್ಯ, ಕೊಡಗು ಹೆಗ್ಗಡೆ ಸಮಾಜದ ಮಾಜಿ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಕ್ರಿಕೆಟ್ ವಿಜೇತ ತಂಡಕ್ಕೆ ಟ್ರೋಪಿ ಪ್ರಾಯೋಜಕರಾದ ಕೊಪ್ಪಡ ಪಟ್ಟು ಪಳಂಗಪ್ಪ, ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್ ಉಪಸ್ಥಿತರಿರುತ್ತಾರೆ. ಕೊರಕುಟ್ಟೀರ ಸರ ಚಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.